- Home
- Short News

Anukshana30 ಮಹಡಿ ಹೊಸ ಬಿಡಿಎ ಕಚೇರಿ: ಹಾಲಿ ಕಟ್ಟಡ ನೆಲಸಮಕ್ಕೆ ಆಕ್ಷೇಪ
ಬೆಂಗಳೂರು: ಕುಮಾರಪಾರ್ಕ್ನಲ್ಲಿರುವ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ (ಬಿಡಿಎ) ಹಾಲಿ ಪ್ರಧಾನ ಕಚೇರಿ ಕಟ್ಟಡಗಳನ್ನು ತೆರವುಗೊಳಿಸಿ ಸುಮಾರು 30 ಮಹಡಿಗಳ ಹೊಸ ಕಚೇರಿ ಸಂಕೀರ್ಣ ನಿರ್ಮಿಸುವ ಪ್ರಸ್ತಾವನೆಗೆ ಆಕ್ಷೇಪ ವ್ಯಕ್ತವಾಗಿದೆ. ಸುಸ್ಥಿತಿಯಲ್ಲಿರುವ ಕಟ್ಟಡಗಳನ್ನು ನೆಲಸಮಗೊಳಿಸುವ ಅಗತ್ಯವೇನು ಎಂಬ ಪ್ರಶ್ನೆ ಎದ್ದಿದ್ದು, ಇದರಿಂದ ಸಾರ್ವಜನಿಕ ಹಣ ವ್ಯರ್ಥವಾಗುವುದರ ಜೊತೆಗೆ ಆವರಣದಲ್ಲಿರುವ ಹಳೆಯ ಮರಗಳು ಹಾಗೂ ಹಸಿರು ಪ್ರದೇಶಕ್ಕೂ ಹಾನಿಯಾಗಬಹುದು ಎಂಬ ಆತಂಕ ವ್ಯಕ್ತವಾಗಿದೆ. ಹಾಲಿ ಕಟ್ಟಡಗಳ ತಾಂತ್ರಿಕ ಸ್ಥಿತಿಯನ್ನು ಪರಿಶೀಲಿಸಿ, ಯೋಜನೆಯ ಅಗತ್ಯತೆಯನ್ನು ಸಾರ್ವಜನಿಕರಿಗೆ ಸ್ಪಷ್ಟಪಡಿಸಬೇಕು ಎಂಬ ಆಗ್ರಹ ಕೇಳಿಬಂದಿದೆ.
23:241 min read
By
Anukshana News Desk
Related articles
- Protestಅ.8ರಂದು ಬೆಂಗಳೂರಿನಲ್ಲಿ ‘ಜನತಾ ನ್ಯಾಯಾಲಯ’2min read

- Greater Bengaluru Authority GBAಎಸ್ಐಆರ್: ಜಿಬಿಎ ವ್ಯಾಪ್ತಿಯಲ್ಲಿ 23.93 ಲಕ್ಷ ನೋಟಿಸ್ ವಿತರಣೆ; ಅ.27ಕ್ಕೆ ಅಂತಿಮ ಮತದಾರರ ಪಟ್ಟಿ3min read

- Bengaluruಟ್ರಾಫಿಕ್ ಮುಕ್ತ, ಹಸಿರು ಮತ್ತು ಸಂಪರ್ಕಿತ ಬೆಂಗಳೂರಿನ ಕನಸು: ರಕ್ಷಣಾ ಭೂಮಿ ಬಳಕೆಗೆ ಸಿಎಂನ 7 ಅಂಶಗಳ ಪ್ರಸ್ತಾವನೆ2min read

- Eventsಸೆ.27ಕ್ಕೆ ಆಲ್ಕೋಹಾಲಿಕ್ಸ್ ಅನಾನಿಮಸ್ ವಾರ್ಷಿಕೋತ್ಸವ1min read

- Eventsಸುಲೈಮಾನ್ ಖತೀಬ್ ಅವರ ಸಾಹಿತ್ಯ ಮತ್ತು ಸಾಮಾಜಿಕ ಸಂದೇಶಗಳನ್ನು ರಂಗದ ಮೇಲೆ ತರುವ ‘ಕೇವೆ ಕಾ ಬನ್’2min read

