ಕಳೆದ ಮೂರು ವರ್ಷಗಳಲ್ಲಿ ₹850 ಕೋಟಿ ಮೌಲ್ಯದ ಮಾದಕ ವಸ್ತುಗಳನ್ನು ವಶಪಡಿಸಿಕೊಂಡಿರುವ ಕರ್ನಾಟಕ ಪೊಲೀಸರು, ಮಾದಕ ವಸ್ತುಗಳ ವಿರುದ್ಧ ಜನಜಾಗೃತಿ ಮೂಡಿಸಲು ಏಕತಾ ಮೋಟಾರ್ ಸೈಕಲ್ ರ್ಯಾಲಿ ನಡೆಸಿದರು.
Latest news
ತುರ್ತು ಚಿಕಿತ್ಸಾ ದಾದಿಯರ ಸೇವೆಗೆ ವಿಶೇಷ ಮನ್ನಣೆ; ಬೆಂಗಳೂರು ಪ್ರೆಸ್ ಕ್ಲಬ್ನಲ್ಲಿ ಅಭಿಯಾನಕ್ಕೆ ಚಾಲನೆ | ಅಪಘಾತ ಅಥವಾ ತುರ್ತು ಪರಿಸ್ಥಿತಿಯ ನಂತರದ ಮೊದಲ 60 ನಿಮಿಷಗಳು ರೋಗಿಯ ಜೀವ ಉಳಿಸುವಲ್ಲಿ ಅತ್ಯಂತ ಮಹತ್ವದ್ದಾಗಿವೆ. ಈ ‘ಗೋಲ್ಡನ್ ಅವರ್’ ಪರಿಕಲ್ಪನೆಯ ಮಹತ್ವವನ್ನು ಸಾರಲು ಮತ್ತು ತುರ್ತು ಚಿಕಿತ್ಸೆಯಲ್ಲಿ ನಿರಂತರ ಸೇವೆ ಸಲ್ಲಿಸುತ್ತಿರುವ ದಾದಿಯರನ್ನು ಗೌರವಿಸಲು ಮ್ಯಾಗ್ನೆಟ್ ಹಾಸ್ಪಿಟಲ್ಸ್ ‘ಗೋಲ್ಡನ್ ಅವರ್ ರೆಕಗ್ನಿಷನ್’ ಅಭಿಯಾನಕ್ಕೆ ಚಾಲನೆ ನೀಡಿತು.
ರೇಬೀಸ್ ಎಂಬ ಮಾರಣಾಂತಿಕ ವೈರಸ್ನಿಂದ ಪ್ರಾಣಿಗಳು ಹಾಗೂ ಮನುಷ್ಯರನ್ನು ರಕ್ಷಿಸುವ ಉದ್ದೇಶದಿಂದ ಚಿಕ್ಕಬಳ್ಳಾಪುರದಲ್ಲಿ ಜಾಗೃತಿ ಅಭಿಯಾನ ಮತ್ತು ಉಚಿತ ಆ್ಯಂಟಿ ರೇಬೀಸ್ ಲಸಿಕಾ ಶಿಬಿರ ಆಯೋಜಿಸಲಾಗಿದ್ದು, 60ಕ್ಕೂ ಹೆಚ್ಚು ನಾಯಿಗಳು ಮತ್ತು ಬೆಕ್ಕುಗಳಿಗೆ ಲಸಿಕೆ ನೀಡಲಾಯಿತು.
ಮಲ್ಲೇಶ್ವರದ ದಿ ಗ್ರೀನ್ ಪಾತ್ ಆವರಣದಲ್ಲಿ ಆಯೋಜಿಸಿರುವ “ಮಲ್ಲೇಶ್ವರ ಹಸಿರು ಸಂತೇ”ಯಲ್ಲಿ ಸಾವಯವ ಉತ್ಪನ್ನಗಳು, ಕೈಮಗ್ಗ ವಸ್ತ್ರಗಳು, ನೈಸರ್ಗಿಕ ಜೀವನಶೈಲಿ ಉತ್ಪನ್ನಗಳು ಹಾಗೂ ಸ್ಥಳೀಯ ಕಲಾಕೃತಿಗಳಿಗೆ ಒಂದೇ ವೇದಿಕೆ ಕಲ್ಪಿಸಲಾಗಿದೆ. ಗ್ರೀನ್ ಪಾತ್ ಸಂಸ್ಥಾಪಕ ಜಯರಾಮ್ ಅವರ ಪರಿಕಲ್ಪನೆಯ ಈ ಮೇಳವು ಪರಿಸರ ಸ್ನೇಹಿ ಉತ್ಪನ್ನಗಳ ಬಳಕೆಯನ್ನು ಉತ್ತೇಜಿಸುವ ಉದ್ದೇಶ ಹೊಂದಿದೆ.

